Telegram Join My Telegram   WhatsApp Join My WhatsApp

ಬೆಳಕಿನ ವಿದ್ಯಮಾನಗಳು : Top Science MCQs Quiz Part 2 for PC, SDA, VAO, PSI, FDA

ಬೆಳಕಿನ ವಿದ್ಯಮಾನಗಳು 

ಪ್ರೀತಿಯ ಸ್ಪರ್ದಾತ್ಮಕ ಪರೀಕ್ಷಾ ಆಕಾಂಕ್ಷಿಗಳಿಗೆ ನಮಸ್ಕಾರ, ಎಲ್ಲರಿಗೂ ನಮ್ಮ ಸಮಗ್ರ ಮಾಹಿತಿ ಸಂಚಾರಿ ವೆಬ್ಸೈಟ್ ಗೆ ಸ್ವಾಗತ.

ನಾವು ಈಗಾಗಲೇ ಬೆಳಕಿನ ವಿದ್ಯಮಾನಗಳು ವಿಷಯಕ್ಕೆ ಸಂಬಂಧಿಸಿದಂತೆ ಮೊದಲನೇ ಭಾಗದಲ್ಲಿ 20 ಪ್ರಶ್ನೆಗಳನ್ನು ನೀಡಿದ್ದೇವೆ. ಈಗ ನಾನು ನಿಮ್ಮ ಮುಂದೆ ಅದೇ ಸರಣಿಯ ಎರಡನೇ ಭಾಗವನ್ನು ಪ್ರಸ್ತುತಪಡಿಸುತ್ತಿದ್ದೇನೆ.

ಈ ಕ್ವಿಜ್ ಸರಣಿಯನ್ನು ನಾವು ಒಟ್ಟು ಮೂರು ಭಾಗಗಳಲ್ಲಿ ವಿನ್ಯಾಸಗೊಳಿಸಿದ್ದೇವೆ ಎಂಬುದನ್ನು ನೀವು ನೆನಪಿನಲ್ಲಿಡಬೇಕು:

ಭಾಗ ಒಂದು: ಈಗಾಗಲೇ ಪ್ರಕಟಗೊಂಡಿದೆ. ನೀವು ಇನ್ನೂ ಭಾಗ ಒಂದರ ಕ್ವಿಜ್ ಅಟೆಂಡ್ ಮಾಡಿಲ್ಲವೆಂದರೆ ದಯವಿಟ್ಟು ನಮ್ಮ ಹಿಂದಿನ ಪೋಸ್ಟ್ ಭೇಟಿ ನೀಡಿ ಅಟೆಂಡ್ ಮಾಡಬಹುದು.

ಭಾಗ ಎರಡು: ಪ್ರಸ್ತುತ ಈಗ ನಿಮಗೆ ನೀಡಿರುವ 21ರಿಂದ 40ವರೆಗಿನ ಕ್ವಿಜ್ ಸರಣಿ.

ಭಾಗ ಮೂರು: ಇಂದು ಸಂಜೆ ಮೂರನೇ ಭಾಗವನ್ನು ಪ್ರಕಟ ಮಾಡಲಿದ್ದೇವೆ. ದಯವಿಟ್ಟು ಕಾದು ನೋಡಿ.

ಸಾಮಾನ್ಯವಾಗಿ ಹಿಂದಿನ ಪರೀಕ್ಷೆಗಳಲ್ಲಿ ನೇರ ಪ್ರಶ್ನೆಗಳನ್ನು ಕೇಳುತ್ತಿದ್ದು ಹೆಚ್ಚು. ಆದರೆ ಪ್ರಸ್ತುತ ನಡೆಯುತ್ತಿರುವ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಗಮನಿಸಿದರೆ ಪ್ರಶ್ನೆಗಳು ಸಾಕಷ್ಟು ಬದಲಾಗಿದೆ. ನೇರ ಪ್ರಶ್ನೆಗಳಿಗಿಂತ ಹೇಳಿಕೆ ಮತ್ತು ಕಾರಣ, ಹೊಂದಿಸಿ ಬರೆಯಿರಿ, ಬಹು ಹೇಳಿಕೆಗಳ ವಿಶ್ಲೇಷಣೆ ಹಾಗೂ ದೈನಂದಿನ ಜೀವನದಲ್ಲಿ ವಿಜ್ಞಾನದ ಅನ್ವಯಗಳ ಬಗ್ಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಹಾಗಾಗಿ ನಾವು ನಿಮಗಾಗಿ ಈ ಎಲ್ಲಾ ರೀತಿಯ ಪ್ರಶ್ನೆಗಳನ್ನು ನೀಡುತ್ತಿದ್ದೇವೆ. ಇವುಗಳು ನಿಮ್ಮ ಮುಂಬರುವ ಪರೀಕ್ಷೆಗಳಿಗೆ ಹೆಚ್ಚು  ಉಪಯೋಗವಾಗುವುದಲ್ಲದೆ ನಿಮ್ಮ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ತಂದುಕೊಡುತ್ತವೆ. ಹಾಗಾಗಿ ಗಮನವಿಟ್ಟು ಈ ಕ್ವಿಜ್ ಸರಣಿಯನ್ನು ಬರೆಯಿರಿ.

ನಿಮ್ಮ ಓದುವಿಕೆ ಮತ್ತು ಪರೀಕ್ಷಾ ಅನುಭವವನ್ನು ಅತ್ಯುತ್ತಮವಾಗಿಸಲು ನಾವು ಈ ಕ್ವಿಜ್ ಅನ್ನು ಒಂದು ವಿಶೇಷವಾದ ಫಾರ್ಮ್ಯಾಟ ನಲ್ಲಿ ವಿನ್ಯಾಸಗೊಳಿಸಿದ್ದೇವೆ.

1. ಒಂದೇ ಪುಟದಲ್ಲಿ ಎಲ್ಲಾ ಪ್ರಶ್ನೆಗಳು, ಇದು ನಿಮ್ಮ ಸಮಯವನ್ನು ಉಳಿಸಲು ಮತ್ತು ಸುಲಭವಾಗಿ ಓದಲು ಅನುಕೂಲವಾಗುವಂತೆ ನಾವು ಮುಂದಿನ ಪ್ರಶ್ನೆಯನ್ನು ಬಳಸಿಲ್ಲ 20 ಪ್ರಶ್ನೆಗಳು ಒಂದರ ಕೆಳಗೆ ಒಂದರಂತೆ ಲಿಸ್ಟ್ ಆಗಿದೆ. ನೀವು ನಿಮ್ಮ ಮೊಬೈಲ್ ಅಥವಾ ಲ್ಯಾಪ್ಟಾಪ್ ನಲ್ಲಿ ಸುಲಭವಾಗಿ ಕೆಳಗೆ ಸ್ಕ್ರಾಲ್ ಮಾಡುತ್ತಾ ಪರೀಕ್ಷೆ ಬರೆಯಬಹುದು ಅಂದರೆ ಕ್ವಿಜ್ ಅಟೆಂಡ್ ಮಾಡಬಹುದು.

2. ನೀವು ಪ್ರತಿ ಪ್ರಶ್ನೆಯನ್ನು ಓದಿದ ನಂತರ, ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಕ್ಲಿಕ್ ಮಾಡಿ. ಒಮ್ಮೆ ನೀವು ಒಂದು ಆಯ್ಕೆಯನ್ನು ಕ್ಲಿಕ್ ಮಾಡಿದರೆ ಆ ಪ್ರಶ್ನೆಯ ಉಳಿದ ಆಯ್ಕೆಗಳು ಲಾಕ್ ಆಗುತ್ತದೆ, ಅಂದರೆ ನೀವು ನಿಮ್ಮ ಉತ್ತರವನ್ನು ಬದಲಾಯಿಸಲು ಸಾಧ್ಯವಿಲ್ಲ. ಇದು ನಿಮ್ಮ ಪರೀಕ್ಷೆಯಲ್ಲಿ OMR ಶೀಟ್ ನಲ್ಲಿ ಒಮ್ಮೆ ರೌಂಡ್ ಮಾಡಿದರೆ  ಮುಗಿಯಿತು ಎನ್ನುವ ಶಿಸ್ತನ್ನು ನಿಮಗೆ ಕಲಿಸುತ್ತದೆ ಹಾಗಾಗಿ ಯೋಚಿಸಿ ಉತ್ತರಿಸಿ.

3. ನೀವು ಆಯ್ಕೆ ಮಾಡಿದ ಉತ್ತರ ಸರಿಯಾಗಿದ್ದರೆ, ಆ ಬಾಕ್ಸ್ ತಕ್ಷಣವೇ ಹಸಿರು ಬಣ್ಣಕ್ಕೆ ತಿರುಗುತ್ತದೆ . ಒಂದು ವೇಳೆ ನಿಮ್ಮ ಉತ್ತರ ತಪ್ಪಾಗಿದ್ದರೆ , ನೀವು ಕ್ಲಿಕ್ ಮಾಡಿದ ಆಯ್ಕೆ ಕೆಂಪು ಬಣ್ಣಕ್ಕೆ ತಿರುಗುತ್ತದೆ ಮತ್ತು ಅದೇ ಸಮಯದಲ್ಲಿ ಅಸಲಿ ಸರಿಯಾದ ಉತ್ತರ ಯಾವುದು ಎಂಬುದು ಹಸಿರು ಬಣ್ಣದಲ್ಲಿ ಹೈಲೈಟ್ ಆಗಿ ನಿಮಗೆ ತೋರಿಸುತ್ತದೆ. ಇದರಿಂದ ನೀವು ಎಲ್ಲಿ ತಪ್ಪು ಮಾಡಿದ್ದೀರಿ ಎಂದು ತಕ್ಷಣವೇ ಅರಿತುಕೊಳ್ಳಬಹುದು.

4. ಈ ಕ್ವಿಜ್ ನ ಅತಿ ದೊಡ್ಡ ಶಕ್ತಿ ಎಂದರೆ ಪ್ರತಿಯೊಂದು ಪ್ರಶ್ನೆಯ ಕೆಳಗೆ ನೀಡಲಾಗಿರುವ ವಿವರಣೆ. ನೀವು ಯಾವುದೇ ಪ್ರಶ್ನೆಗೆ ಉತ್ತರಿಸಿದರು ತಕ್ಷಣವೇ ಆ ಪ್ರಶ್ನೆ ಕೇಳದೆ ಒಂದು ಬೂದು ಕಣ್ಣದ ಬಾಕ್ಸ್ ಓಪನ್ ಆಗುತ್ತದೆ. ಅದರಲ್ಲಿ ಆ ಪ್ರಶ್ನೆ ಸರಿಯಾದ ಉತ್ತರಕ್ಕೆ ವೈಜ್ಞಾನಿಕ ಕಾರಣವೇನು? ಮತ್ತು ಉಳಿದ ಮೂರು ಆಯ್ಕೆಗಳು ಏಕೆ ತಪ್ಪಾಗಿದೆ? ಎಂಬುದರ ಸಂಪೂರ್ಣ ವಿವರಣೆಯನ್ನು ನೀಡಲಾಗಿರುತ್ತದೆ.

ನಿಮಗೆ ನನ್ನ ಒಂದು ಮನವಿ . ಏನೆಂದರೆ ಕೇವಲ ಸರಿ ತಪ್ಪು ನೋಡಿಕೊಂಡು ಮುಂದಿನ ಪ್ರಶ್ನೆಗೆ ಹೋಗಬೇಡಿ ದಯವಿಟ್ಟು ಆ ವಿವರಣೆಯನ್ನು ಸಂಪೂರ್ಣವಾಗಿ ಓದಿ ಏಕೆಂದರೆ ಈ ವಿವರಣೆಯನ್ನು ನೀವು ಓದಿದರೆ ನಿಮಗೆ ಇನ್ನೂ ಹೆಚ್ಚು ಜ್ಞಾನ ಸಿಗುತ್ತದೆ.

ಈ 20 ಪ್ರಶ್ನೆಗಳ ಸವಾಲನ್ನು ನೀವು ಯಶಸ್ವಿಯಾಗಿ ಎದುರಿಸಿದ ನಂತರ ಕಾಮೆಂಟ್ ಬಾಕ್ಸ್ ನಲ್ಲಿ ನೀವು 20ಕ್ಕೆ ಎಷ್ಟು ಅಂಕಗಳನ್ನು ಗಳಿಸಿದ್ದೀರಿ ಎಂಬುದನ್ನು ಪ್ರಾಮಾಣಿಕವಾಗಿ ಹಂಚಿಕೊಳ್ಳಿ ಇದು ನಿಮ್ಮಂತಹ ಸಾವಿರಾರು ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಸ್ಪರ್ಧೆಯನ್ನು ಹುಟ್ಟು ಹಾಕುತ್ತದೆ.

ಇದಾದ ನಂತರ ಬೆಳಕಿನ ವಿದ್ಯಮಾನಗಳು ಈ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಅಂತಿಮ ಘಟ್ಟವಾದ ಭಾಗ ಮೂರನ್ನು ನಿರೀಕ್ಷಿಸಿ. ಆ ಭಾಗದಲ್ಲಿ ನಾವು ಈ ವಿಷಯಕ್ಕೆ ಸಂಬಂಧಿಸಿದಂತೆ 41 ರಿಂದ 60 ಪ್ರಶ್ನೆಗಳನ್ನು ನೀಡುತ್ತೇವೆ.

ನಿಮ್ಮ ಪರೀಕ್ಷಾ ಸಿದ್ಧತೆ ನಿರಂತರವಾಗಿರಲಿ, ಸತತ ಪ್ರಯತ್ನವಿದ್ದರೆ ಯಶಸ್ಸು ಖಂಡಿತ.

ನನ್ನ ಪ್ರೀತಿಯ ಓದುಗರಲ್ಲಿ ನಾನು ಕೇಳಿಕೊಳ್ಳುವ ಒಂದು ಪ್ರಮುಖ ಸಲಹೆ ಎಂದರೆ, ಈ ಕ್ವಿಜ್ ಅನ್ನು ಕೇವಲ ಒಂದು ಆಟದಂತೆ ಅಥವಾ ಟೈಮ್ ಪಾಸ್ ನಂತೆ ತೆಗೆದುಕೊಳ್ಳಬೇಡಿ. ಪರೀಕ್ಷೆ ಬರೆಯುವಾಗ ಅಂದರೆ ಟೆಸ್ಟ್ ಅಟೆಂಡ್ ಮಾಡುವಾಗ ನಿಮ್ಮ ಬಳಿ ಒಂದು ನೋಟ್ ಬುಕ್ ಮತ್ತು ಪೆನ್ ಇರಲಿ. ನೀವು ತಪ್ಪು ಮಾಡಿದ ಪ್ರಶ್ನೆಗಳ ಸರಿಯಾದ ಉತ್ತರ ಮತ್ತು ಅದರ ಕೆಳಗೆ ಬರುವ ವಿವರಣೆಯನ್ನು ಪಾಯಿಂಟ್ಸ್ ರೂಪದಲ್ಲಿ ಶಾರ್ಟ್ ನೋಟ್ಸ್ ಮಾಡಿಕೊಳ್ಳಿ.

ಏಕೆಂದರೆ ಮುಂದೆ ನೀವು ಮುಖ್ಯ ಪರೀಕ್ಷೆಗೆ ಹೋಗಲು ಕೆಲವು ದಿನಗಳು ಇರುವಾಗ ಇಡೀ ಪಠ್ಯಪುಸ್ತಕವನ್ನು ಮತ್ತೆ ಓದಲು ಸಾಧ್ಯವಿಲ್ಲ. ಆ ಸಮಯದಲ್ಲಿ ನೀವು ಮಾಡಿಕೊಂಡ ಈ ಶಾರ್ಟ್ಸ್ ನೋಟ್ಸ್ ಗಳು ನಿಮಗೆ ತುಂಬಾ ಉಪಯೋಗ ಆಗುತ್ತದೆ ಮತ್ತು ಸುಲಭವಾಗಿ ರಿವಿಜನ್ ಮಾಡಲು ಕೂಡ ಸಹಾಯ ಆಗುತ್ತದೆ.

ಈಗ ನೀವು ಎರಡನೇ ಭಾಗದ ಬೆಳಕಿನ ವಿದ್ಯಮಾನಗಳು ಕ್ವಿಜ್ ಅನ್ನು ಪ್ರಾರಂಭಿಸಿ.

ಆಲ್ ದ ಬೆಸ್ಟ್.

ಕೊನೆಯದಾಗಿ ಒಂದು ಮಾತು

ಈ ಕ್ವಿಜ್ ನಲ್ಲಿ ನಿಮಗೆ 20ಕ್ಕೆ 20 ಅಂಕಗಳು ಬರದೇ ಇರಬಹುದು, ಅಥವಾ 10 ಅಂಕಗಳು ಬರಬಹುದು . ದಯವಿಟ್ಟು ಅದಕ್ಕಾಗಿ ಖಂಡಿತ ನಿರಾಶರಾಗಬೇಡಿ. ತಪ್ಪು ಮಾಡುವುದೇ ಕಲಿಯುವಿಕೆಯ ಮೊದಲ ಹೆಜ್ಜೆ. ಇಲ್ಲಿ ನೀವು ಎಷ್ಟು ತಪ್ಪು ಮಾಡುತ್ತಿರೋ, ಅಷ್ಟೇ ಹೊಸ ವಿಷಯಗಳನ್ನು ನೀವು ಕಲಿಯುತ್ತಾ ಇದ್ದೀರಿ ಎಂದು ಅರ್ಥ. ನೀವು ಇಲ್ಲಿ ಮಾಡುವ ತಪ್ಪುಗಳು ನಾಳೆ ನಿಮ್ಮ ಮುಖ್ಯ ಪರೀಕ್ಷೆಯಲ್ಲಿ ಮರುಕಳಿಸಬಾರದು, ಅಷ್ಟೇ ನಮ್ಮ ಈ ಶ್ರಮದ ಹಿಂದಿನ ಅಸಲಿ ಉದ್ದೇಶ.

ಹಾಗೆ, ಇನ್ನಷ್ಟು ಕಠಿಣವಾದ ಮತ್ತು ಅಷ್ಟೇ ಆಸಕ್ತಿದಾಯಕವಾದ ನಮ್ಮ ಸರಣಿಯ ಅಂತಿಮ ಪಟ್ಟ ಭಾಗ ಮೂರಕ್ಕೆ ಸಿದ್ಧರಾಗಿ.

ಇದೇ ರೀತಿಯ ಪ್ರತಿದಿನದ ಕ್ವಿಜ್ ಅಟೆಂಡ್ ಮಾಡಲು ಮತ್ತು ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಮತ್ತು ವಾಟ್ಸಾಪ್ ಗುಂಪುಗಳಿಗೆ ಸೇರಿಕೊಳ್ಳಿ ಹಾಗೂ ನಿಮ್ಮ ಸ್ನೇಹಿತರಿಗೂ ಈ ವಿಷಯಗಳನ್ನು ಶೇರ್ ಮಾಡಿ.

ಟೆಲಿಗ್ರಾಂ ಗ್ರೂಪ್ ಲಿಂಕ್ ಕ್ಲಿಕ್ ಮಾಡಿ 

ವಾಟ್ಸಾಪ್ ಗ್ರೂಪ್ ಲಿಂಕ್ ಕ್ಲಿಕ್ ಮಾಡಿ 

Read more:

ಈ  ಬೆಳಕಿನ ವಿದ್ಯಮಾನಗಳು ಸರಣಿಯ ಮೊದಲ ಭಾಗವಾದ ಕ್ವಿಜ್ 1 ಅನ್ನು ಬರೆಯಲು 👇 ಕ್ಲಿಕ್ ಮಾಡಿ 

ಬೆಳಕಿನ ವಿದ್ಯಮಾನಗಳು: Top Science MCQs Quiz part 1 for PC, PSI, SDA, FDA, VAO

Leave a Comment