PC Free Mock Test 6
ಎಲ್ಲರಿಗೂ ನಮಸ್ಕಾರ, ‘ಸಮಗ್ರ ಮಾಹಿತಿ ಸಂಚಾರಿ’ ವೇದಿಕೆಗೆ ನಿಮಗೆಲ್ಲರಿಗೂ ಆತ್ಮೀಯ ಸ್ವಾಗತ.
ಇಂದು ನಾವು ‘ಉಚಿತ ಮಾದರಿ ಪರೀಕ್ಷೆ 6’ (Free Mock Test 6) ಅನ್ನು ಬರೆಯಲು ಸಜ್ಜಾಗಿದ್ದೇವೆ. ಎಲ್ಲದಕ್ಕೂ ಮುಂಚೆ ನಿಮಗೆ ಒಂದು ಮಾತು ನೆನಪಿರಲಿ… ಈ ಮಾದರಿ ಪರೀಕ್ಷೆಗಳು ನಿಮ್ಮ ಅಂತಿಮ ಭವಿಷ್ಯವನ್ನು ನಿರ್ಧರಿಸುವುದಿಲ್ಲ, ಬದಲಾಗಿ ಆ ಭವಿಷ್ಯವನ್ನು ಕಟ್ಟಿಕೊಳ್ಳಲು ನಿಮಗೆ ದಾರಿ ತೋರಿಸುತ್ತವೆ. “ಯುದ್ಧ ಕಾಲದಲ್ಲಿ ರಕ್ತ ಹರಿಸಬಾರದು ಅಂದರೆ, ಶಾಂತಿ ಕಾಲದಲ್ಲಿ ಹೆಚ್ಚು ಬೆವರು ಹರಿಸಬೇಕು” ಎಂಬ ಮಾತಿದೆ. ಈ ಮಾದರಿ ಪರೀಕ್ಷೆಗಳು ನೀವು ಬೆವರು ಹರಿಸುವ ಸಮಯ. ಇಲ್ಲಿ ನೀವು ಎಷ್ಟು ತಪ್ಪುಗಳನ್ನು ಮಾಡುತ್ತೀರೋ ಅಷ್ಟು ಒಳ್ಳೆಯದು, ಏಕೆಂದರೆ ಆ ತಪ್ಪುಗಳನ್ನು ನೀವು ಅಂತಿಮ ಪರೀಕ್ಷೆಯಲ್ಲಿ (Main Exam) ಖಂಡಿತಾ ಮಾಡುವುದಿಲ್ಲ.
ಒಮ್ಮೆ ಕಣ್ಮುಚ್ಚಿ ಯೋಚಿಸಿ… ನೀವೇಕೆ ಈ ಸ್ಪರ್ಧಾತ್ಮಕ (Competitive Exams) ಜಗತ್ತಿಗೆ ಕಾಲಿಟ್ಟಿರಿ? ನಿಮ್ಮೂರಿನಲ್ಲಿ, ನಿಮ್ಮ ಮನೆಯಲ್ಲಿ ನಿಮ್ಮ ತಂದೆ-ತಾಯಿ ನಿಮಗಾಗಿ ಎಷ್ಟು ಕಷ್ಟಪಡುತ್ತಿದ್ದಾರೆ? ನೀವು ಇಲ್ಲಿ ರೂಮ್ ಮಾಡಿಕೊಂಡು, ಊಟಕ್ಕೂ ಪರದಾಡಿಕೊಂಡು, ರಾತ್ರಿ ಹಗಲು ಎನ್ನದೆ ಓದುತ್ತಿದ್ದೀರಿ ಅಂದರೆ, ಅದರ ಹಿಂದೆ ಒಂದು ದೊಡ್ಡ ಕನಸಿದೆ. ‘ನನ್ನ ಮಗ ಅಥವಾ ಮಗಳು ನಾಳೆ ಒಂದು ಸರ್ಕಾರಿ ಹುದ್ದೆ ಹಿಡಿದು, ಸಮಾಜದಲ್ಲಿ ಒಂದು ಗೌರವಾನ್ವಿತ ಸ್ಥಾನದಲ್ಲಿ ನಿಲ್ಲುತ್ತಾನೆ/ಳೆ’ ಎಂಬ ನಿಮ್ಮ ಹೆತ್ತವರ ನಂಬಿಕೆ ಇದೆ. ಆ ನಂಬಿಕೆಯನ್ನು ಹುಸಿ ಮಾಡಬಾರದು ಎನ್ನುವ ಕಿಚ್ಚು ನಿಮ್ಮ ಎದೆಯಲ್ಲಿರಬೇಕು.
ಇಂದು ನೀವು ಬರೆಯಲು ಹೊರಟಿರುವ ಈ ‘ಮಾದರಿ ಪರೀಕ್ಷೆ 6’, ಕೇವಲ ಒಂದು ಪೇಪರ್ ಅಲ್ಲ. ಇದು ನಿಮ್ಮ ಇದುವರೆಗಿನ ಓದಿನ, ನಿಮ್ಮ ಪ್ರಾಮಾಣಿಕತೆಯ, ನಿಮ್ಮ ಶ್ರಮದ ಕನ್ನಡಿ. ನಾನು ಇದನ್ನು ಉಚಿತವಾಗಿ ನೀಡುತ್ತಿದ್ದೇನೆ ಎಂದರೆ, ಇದರ ಬೆಲೆ ಶೂನ್ಯ ಎಂದರ್ಥವಲ್ಲ. ಇದರ ಬೆಲೆ ನಿಮ್ಮ ಸಮಯ, ನಿಮ್ಮ ಏಕಾಗ್ರತೆ ಮತ್ತು ನಿಮ್ಮ ಭವಿಷ್ಯ. ಮಾರುಕಟ್ಟೆಯಲ್ಲಿ ಸಾವಿರಾರು ರೂಪಾಯಿ ಕೊಟ್ಟು ಟೆಸ್ಟ್ ಸಿರೀಸ್ ತೆಗೆದುಕೊಳ್ಳುವವರಿದ್ದಾರೆ. ಆದರೆ, ದುಡ್ಡಿಲ್ಲದ ಕಾರಣಕ್ಕೆ ಯಾವೊಬ್ಬ ಪ್ರತಿಭಾವಂತ ವಿದ್ಯಾರ್ಥಿಯೂ ಹಿಂದೆ ಬೀಳಬಾರದು ಎನ್ನುವ ಏಕೈಕ ಉದ್ದೇಶದಿಂದ ಈ ಟೆಸ್ಟ್ ಅನ್ನು ಸಿದ್ಧಪಡಿಸಿದ್ದೇನೆ. ಹಾಗಾಗಿ, ಇದಕ್ಕೊಂದು ಗೌರವ ಕೊಡಿ.
ಟೆಸ್ಟ್ ಶುರು ಮಾಡುವ ಮುನ್ನ ನನ್ನದೊಂದು ಐದು ನಿಮಿಷದ ಕಿವಿಮಾತು, ದಯವಿಟ್ಟು ಪ್ರತಿಯೊಬ್ಬರೂ ಲಕ್ಷ್ಯವಿಟ್ಟು ಕೇಳಿ:
ಒಂದನೇದು – ಮಾನಸಿಕ ಸಿದ್ಧತೆ (Mindset):
ಈಗ ನೀವು ಟೆಸ್ಟ್ ಅಟೆಂಡ್ ಮಾಡಲು ಶುರು ಮಾಡಿದ ತಕ್ಷಣ, “ಇದು ಕೇವಲ ಮಾದರಿ ಪರೀಕ್ಷೆ, ಏನಾದರಾಗಲಿ ಬಿಡು” ಎನ್ನುವ ನಿರ್ಲಕ್ಷ್ಯ ಬೇಡ. ನೀವು ಈಗ ಕೂತಿರುವ ಜಾಗವೇ ನಿಮ್ಮ ಪೊಲೀಸ್ ಪರೀಕ್ಷೆಯ ಮುಖ್ಯ ಪರೀಕ್ಷಾ ಕೇಂದ್ರ ಎಂದು ಭಾವಿಸಿ. ನಿಮ್ಮ ಸುತ್ತಮುತ್ತ ಯಾರಿದ್ದಾರೆ ಎಂಬುದನ್ನು ಮರೆತುಬಿಡಿ. ನಿಮ್ಮ ಗುರಿ ಕೇವಲ ಆ ಪ್ರಶ್ನೆಯ ಮೇಲೆ ಮಾತ್ರ ಇರಬೇಕು.
ಎರಡನೇದು – ಪ್ರಶ್ನೆಗಳನ್ನು ಓದುವ ಕಲೆ:
ನಮ್ಮ ಬಹಳಷ್ಟು ವಿದ್ಯಾರ್ಥಿಗಳು ಎಡವುತ್ತಿರುವುದೇ ಇಲ್ಲಿ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಶ್ನೆಗಳು ನೇರವಾಗಿರುವುದಿಲ್ಲ. ಒಂದು ಪ್ರಶ್ನೆಯನ್ನು ನೋಡಿದ ತಕ್ಷಣ “ಅರೆ! ಇದು ನನಗೆ ಗೊತ್ತಿದೆ” ಅಂತ ಅವಸರದಲ್ಲಿ ‘A’ ಅಥವಾ ‘B’ ಆಪ್ಷನ್ ಟಿಕ್ ಮಾಡಬೇಡಿ. ದಯವಿಟ್ಟು ಕೊನೆಯವರೆಗೂ ಓದಿ. ಅಲ್ಲಿ ಎಲ್ಲೋ ಮೂಲೆಯಲ್ಲಿ “ಇವುಗಳಲ್ಲಿ ಯಾವುದು ಸರಿಯಲ್ಲ?” (Which of the following is NOT true?) ಅಂತ ಇರುತ್ತದೆ. ಆ ಒಂದು ‘ಅಲ್ಲ’ (NOT) ಎನ್ನುವ ಪದವನ್ನು ನೀವು ಗಮನಿಸದಿದ್ದರೆ, ನಿಮ್ಮ ಒಂದು ಅಂಕ ಕೈತಪ್ಪಿ ಹೋಗುತ್ತದೆ. ನೆನಪಿರಲಿ, ಒಂದೊಂದು ಅಂಕವೂ ನಿಮ್ಮ ರ್ಯಾಂಕ್ ಅನ್ನು ಸಾವಿರಾರು ಸ್ಥಾನಗಳಷ್ಟು ಕೆಳಗೆ ತಳ್ಳಬಲ್ಲದು. ಎಲ್ಲಾ ನಾಲ್ಕು ಆಯ್ಕೆಗಳನ್ನು (Options) ಓದಿದ ಮೇಲೆಯೇ ನಿಮ್ಮ ಉತ್ತರವನ್ನು ನಿರ್ಧರಿಸಿ.
ಮೂರನೇದು – ಸಮಯ ನಿರ್ವಹಣೆ (Time Management):
ಕಾಂಪಿಟೇಟಿವ್ ಎಕ್ಸಾಮ್ ಅಂದರೆ ಕೇವಲ ಜ್ಞಾನದ ಪರೀಕ್ಷೆಯಲ್ಲ, ಅದು ನಿಮ್ಮ ವೇಗ ಮತ್ತು ನಿಖರತೆಯ (Speed and Accuracy) ಪರೀಕ್ಷೆ. ಕಠಿಣವಾದ ಪ್ರಶ್ನೆ ಸಿಕ್ಕಾಗ ಅಲ್ಲೇ ನಿಂತುಬಿಡಬೇಡಿ. ನಿಮ್ಮ ಇಗೋ (Ego) ಅನ್ನು ಪಕ್ಕಕ್ಕಿಡಿ. “ನಾನು ಇಷ್ಟು ಓದಿದ್ದೇನೆ, ಈ ಪ್ರಶ್ನೆಯನ್ನು ಸರಿ ಮಾಡೇ ಮಾಡುತ್ತೇನೆ” ಅಂತ ಒಂದು ಪ್ರಶ್ನೆಗೆ ಐದು ನಿಮಿಷ ವ್ಯರ್ಥ ಮಾಡಿದರೆ, ಮುಂದೆ ನಿಮಗೆ ಗೊತ್ತಿರುವ ಐದು ಸುಲಭ ಪ್ರಶ್ನೆಗಳನ್ನು ಓದಲು ಸಮಯವಿರುವುದಿಲ್ಲ. ಗೊತ್ತಿಲ್ವಾ? ಸ್ಕಿಪ್ ಮಾಡಿ, ಮುಂದೆ ಹೋಗಿ. ಕೊನೆಯಲ್ಲಿ ಸಮಯ ಉಳಿದರೆ ಮತ್ತೆ ಆ ಪ್ರಶ್ನೆಗೆ ಹಿಂದಿರುಗಿ.
ನಾಲ್ಕನೇದು – ನೆಗೆಟಿವ್ ಮಾರ್ಕಿಂಗ್ (Negative Marking) ಬಗ್ಗೆ ಎಚ್ಚರ:
ಇದು ಅತ್ಯಂತ ಅಪಾಯಕಾರಿ. ಗೆಸ್ ವರ್ಕ್ (Guess work) ಮಾಡಬೇಡಿ. ನೂರಕ್ಕೆ ನೂರು ಅಥವಾ 50-50 ಖಚಿತತೆ ಇದ್ದರೆ ಮಾತ್ರ ರಿಸ್ಕ್ ತೆಗೆದುಕೊಳ್ಳಿ. ಸುಮ್ಮನೆ ಅದೃಷ್ಟದ ಮೇಲೆ A, B, C, D ಅಂತ ಟಿಕ್ ಮಾಡುತ್ತಾ ಹೋದರೆ, ನೀವು ಸರಿಯಾಗಿ ಬರೆದು ಗಳಿಸಿದ ಅಂಕಗಳೂ ಕೂಡ ಮೈನಸ್ ಆಗಿಬಿಡುತ್ತವೆ. ನಿಮಗೆ ಎಷ್ಟು ಗೊತ್ತೋ ಅಷ್ಟನ್ನೇ ಪ್ರಾಮಾಣಿಕವಾಗಿ ಅಟೆಂಡ್ ಮಾಡಿ.
ಈ ಮೇಲಿನ ನಾಲ್ಕು ವಿಷಯವನ್ನು ನೀವು ನಿಮ್ಮ ಮುಖ್ಯ ಪರೀಕ್ಷೆಯನ್ನು ಬರೆಯುವಾಗ ನೆನಪಿಟ್ಟುಕೊಂಡು ಪರೀಕ್ಷೆಯನ್ನು ಬರೆಯಿರಿ.
ನಾನು ಇಲ್ಲಿ ಐವತ್ತು ಪ್ರಶ್ನೆಗಳನ್ನು ನೀಡಿದ್ದೇನೆ, ನೀವು ಪ್ರತಿಯೊಂದು ಪ್ರಶ್ನೆಗೂ ಉತ್ತರವನ್ನು ನೀಡಿದಾಗ ತಕ್ಷಣ ಕೆಳಗಡೆ ನಿಮಗೆ ಉತ್ತರ ಮತ್ತು ಉತ್ತರದ ವಿವರಣೆ ದೊರಕುತ್ತದೆ. ನಾನು ಹೀಗೆ ನಿಮಗೆ ನೀಡಿರಲು ಕಾರಣ, ನೀವು ತಪ್ಪು ಮಾಡಿದ ತಕ್ಷಣ ನಿಮ್ಮ ತಪ್ಪು ಅರಿವಾಗಿ ಮುಂದೆ ನಿಮ್ಮ ಮುಖ್ಯ ಪರೀಕ್ಷೆಯಲ್ಲಿ ಈ ತಪ್ಪನ್ನು ಮಾಡಬಾರದು ಎಂಬ ಕಾರಣಕ್ಕೆ ಈ ರೀತಿಯಾಗಿ ನೀಡಿದ್ದೇನೆ. ದಯವಿಟ್ಟು ಇಲ್ಲಿ ಮಾಡಿದ ತಪ್ಪನ್ನು ನಿಮ್ಮ ಮುಖ್ಯ ಪರೀಕ್ಷೆಯಲ್ಲಿ ತಿದ್ದಿಕೊಂಡು ನಿಮ್ಮ ಪರೀಕ್ಷೆಯನ್ನು ಬರೆಯಿರಿ.
ಸ್ಪರ್ಧಾರ್ಥಿಗಳೇ, ಸ್ಪರ್ಧಾತ್ಮಕ ಪರೀಕ್ಷೆ ಅನ್ನೋದು ಒಂದು ದೊಡ್ಡ ಸಾಗರ. ಲಕ್ಷಾಂತರ ಜನ ಪರೀಕ್ಷೆ ಬರೆಯುತ್ತಾರೆ, ಆದರೆ ಆಯ್ಕೆಯಾಗುವವರು ಕೇವಲ ನೂರಾರು ಜನ ಮಾತ್ರ. ಆ ನೂರಾರು ಜನರಲ್ಲಿ ನೀವೊಬ್ಬರಾಗಬೇಕು ಅಂದರೆ, ನಿಮ್ಮಲ್ಲಿ ಉಳಿದವರಿಗಿಂತ ವಿಭಿನ್ನವಾದ ಛಲ ಇರಬೇಕು.
ಈಗ ನಾನು ನೀಡಿರುವ ಟೆಸ್ಟ್ ನ ವಿಶೇಷತೆಯನ್ನು ತಿಳಿಯೋಣ ಬನ್ನಿ
ಈ ‘ಮಾದರಿ ಪರೀಕ್ಷೆ – 6’ ಏಕೆ ವಿಭಿನ್ನ?
ನಮ್ಮ ಈ ಟೆಸ್ಟ್‌ನ ಅತಿ ದೊಡ್ಡ ವಿಶೇಷತೆ ಎಂದರೆ ‘ತಕ್ಷಣದ ವಿವರಣೆ’ (Instant Explanation).
ನೀವು ಪರೀಕ್ಷೆ ಮುಗಿಸಿ ಫಲಿತಾಂಶಕ್ಕಾಗಿ ದಿನಗಟ್ಟಲೆ ಕಾಯುವಂತಿಲ್ಲ. ನೀವು ಒಂದು ಪ್ರಶ್ನೆಗೆ ಉತ್ತರವನ್ನು ಕ್ಲಿಕ್ ಮಾಡಿದ ಮರುಕ್ಷಣವೇ ಅದು ಸರಿಯೋ ಅಥವಾ ತಪ್ಪೋ ಎಂದು ಸ್ಕ್ರೀನ್ ಮೇಲೆ ಮೂಡುತ್ತದೆ. ಸರಿ ಉತ್ತರ ಹಸಿರು ಬಣ್ಣದಲ್ಲಿ ಬಂದರೆ, ತಪ್ಪು ಉತ್ತರ ಕೆಂಪು ಬಣ್ಣದಲ್ಲಿ ಮೂಡಿ ಬರುತ್ತದೆ. ಕೇವಲ ಅಷ್ಟೇ ಅಲ್ಲ, ಆ ಉತ್ತರ ಏಕೆ ಸರಿ? ಉಳಿದ ಆಯ್ಕೆಗಳು ಏಕೆ ತಪ್ಪು? ಆ ವಿಷಯದ ಹಿನ್ನೆಲೆ ಏನು? ಎಂಬುದರ ಸಂಪೂರ್ಣ ವಿವರಣೆ (Detailed Notes) ಅಲ್ಲಿಯೇ ತೆರೆದುಕೊಳ್ಳುತ್ತದೆ. ಅಂದರೆ, ನೀವು ಈ ಪ್ರಶ್ನೆಗಳನ್ನು ಬಿಡಿಸುವಷ್ಟರಲ್ಲಿ, ಕನಿಷ್ಠ 150 ರಿಂದ 200 ಹೊಸ ವಿಷಯಗಳನ್ನು ಸಂಪೂರ್ಣ ಉಚಿತವಾಗಿ ಕಲಿತುಕೊಳ್ಳುತ್ತೀರಿ.
ಈ ಬಾರಿ ನಿಮ್ಮ ಪೊಲೀಸ್ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸುತ್ತಿರುವುದರಿಂದ, ಪ್ರಶ್ನೆಗಳ ಮಟ್ಟ ಖಂಡಿತವಾಗಿಯೂ ಸ್ವಲ್ಪ ಕಠಿಣವಾಗಿರುತ್ತದೆ. ನೇರವಾದ ಪ್ರಶ್ನೆಗಳಿಗಿಂತ, ವಿಶ್ಲೇಷಣಾತ್ಮಕ ಪ್ರಶ್ನೆಗಳು ಹೆಚ್ಚು ಬರಲಿವೆ. ಹಾಗಾಗಿ ನೀವು ಈ ಪರೀಕ್ಷೆಯಲ್ಲಿ ಕೇವಲ ಉತ್ತರವನ್ನು ಮಾತ್ರ ನೋಡದೆ, ಅದರ ಕೆಳಗೆ ನಾನು ನೀಡಿರುವ ವಿವರಣೆಯನ್ನು ಓದಲೇಬೇಕು.
ಪರೀಕ್ಷೆ ಬರೆಯುವ ಮುನ್ನ ನಿಯಮಗಳು
ಈ ಕೆಳಗಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ:
ಗಂಭೀರತೆ ಇರಲಿ: ಟಿವಿ ನೋಡುತ್ತಾ, ಸ್ನೇಹಿತರೊಂದಿಗೆ ಮಾತನಾಡುತ್ತಾ ಅಥವಾ ಮಲಗಿಕೊಂಡು ಪರೀಕ್ಷೆ ಬರೆಯಬೇಡಿ. ನೀವು ಈಗ ಕೂತಿರುವ ಜಾಗವೇ KEA ಪರೀಕ್ಷಾ ಕೇಂದ್ರ ಎಂದು ಭಾವಿಸಿ, ಫೈನಲ್ ಎಕ್ಸಾಮ್ ಬರೆಯುತ್ತಿರುವಷ್ಟೇ ಗಾಂಭೀರ್ಯದಿಂದ ಎದುರಿಸಿ.
ನೋಟ್ಸ್ ಮತ್ತು ಪೆನ್ ಕಡ್ಡಾಯ: ಪರೀಕ್ಷೆ ಶುರು ಮಾಡುವ ಮೊದಲು ನಿಮ್ಮ ಪಕ್ಕದಲ್ಲಿ ಒಂದು ನೋಟ್‌ಬುಕ್ ಮತ್ತು ಪೆನ್ ಇಟ್ಟುಕೊಳ್ಳಿ. ನಾನು ನೀಡುವ ವಿವರಣೆಯಲ್ಲಿನ ಹೊಸ ಅಂಶಗಳನ್ನು, ನಿಮಗೆ ಗೊತ್ತಿಲ್ಲದ ಮಾಹಿತಿಯನ್ನು ತಕ್ಷಣ ಶಾರ್ಟ್-ನೋಟ್ಸ್ ಮಾಡಿಕೊಳ್ಳಿ. ಇದು ಪರೀಕ್ಷೆಯ ಕೊನೆಯ ವಾರದಲ್ಲಿ ರಿವಿಷನ್ ಮಾಡಲು ಬ್ರಹ್ಮಾಸ್ತ್ರದಂತೆ ಕೆಲಸ ಮಾಡುತ್ತದೆ.
ಗುದ್ದೆಟು (Blind Guess) ಬೇಡ: ಪ್ರಶ್ನೆ ಗೊತ್ತಿಲ್ಲವೆಂದರೆ ಯೋಚಿಸಿ, ಸ್ಕಿಪ್ ಮಾಡಿ ಮುಂದೆ ಹೋಗಿ. ಆದರೆ ಸುಮ್ಮನೆ ಯಾವುದೋ ಒಂದು ಆಪ್ಷನ್ ಮೇಲೆ ಕ್ಲಿಕ್ ಮಾಡಬೇಡಿ. ನೆಗೆಟಿವ್ ಮಾರ್ಕಿಂಗ್ ಇದೆ ಎಂದು ಭಾವಿಸಿಯೇ ನಿಮ್ಮ ನಿಖರತೆಯನ್ನು (Accuracy) ಕಾಪಾಡಿಕೊಳ್ಳಿ.
ವಿವರಣೆಯನ್ನು ತಪ್ಪದೇ ಓದಿ: ನಿಮ್ಮ ಉತ್ತರ ಸರಿಯಾಗಿದ್ದರೂ ಸರಿ, ತಪ್ಪಾಗಿದ್ದರೂ ಸರಿ, ಕೆಳಗೆ ಬರುವ ವಿವರಣೆಯನ್ನು ಕಡ್ಡಾಯವಾಗಿ ಓದಿರಿ. ಅಲ್ಲಿಯೇ ಅಸಲಿ ಜ್ಞಾನ ಅಡಗಿರುವುದು.
ಒಂದು ಸಣ್ಣ ವಿನಂತಿ: ಜ್ಞಾನವನ್ನು ಹಂಚಿದಷ್ಟು ಬೆಳೆಯುತ್ತದೆ. ಈ ಅತ್ಯಮೂಲ್ಯವಾದ ಮತ್ತು ಸಂಪೂರ್ಣ ಉಚಿತವಾದ ಪರೀಕ್ಷೆಯ ಲಿಂಕ್ ಅನ್ನು ನಿಮ್ಮ ವಾಟ್ಸಾಪ್, ಟೆಲಿಗ್ರಾಮ್ ಗ್ರೂಪ್‌ಗಳಲ್ಲಿರುವ ನಿಮ್ಮೆಲ್ಲಾ ಸ್ನೇಹಿತರಿಗೂ, ಮುಖ್ಯವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ತಪ್ಪದೇ ಶೇರ್ ಮಾಡಿ. ದುಡ್ಡಿಲ್ಲದ ಕಾರಣಕ್ಕೆ ಯಾವೊಬ್ಬ ಪ್ರತಿಭಾವಂತನೂ ಹಿಂದೆ ಬೀಳಬಾರದು. ಒಟ್ಟಿಗೆ ಕಲಿಯೋಣ, ಒಟ್ಟಿಗೆ ಬೆಳೆಯೋಣ.
ಕೊನೆಯದಾಗಿ ಇದೇ ರೀತಿಯ ಉಚಿತ ಮಾದರಿ ಪರೀಕ್ಷೆಗಳಿಗೆ ಮತ್ತು ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂ ಮತ್ತು ವಾಟ್ಸಾಪ್ ಗುಂಪುಗಳಿಗೆ ಜಾಯಿನ್ ಆಗಿ.
ಟೆಲಿಗ್ರಾಂ ಗ್ರೂಪ್ ಲಿಂಕ್: ಕ್ಲಿಕ್ ಮಾಡಿ
Whatsapp group link:click here
ಧನ್ಯವಾದಗಳು.
ಇನ್ನು ತಡ ಮಾಡದೆ ಕೆಳಗೆ ನೀಡಿರುವ ನಿಮ್ಮ ಆರನೇ ಉಚಿತ ಮಾದರಿ ಪರೀಕ್ಷೆಯನ್ನು ಶುರು ಮಾಡಿ.
ಐದನೇ ಮಾದರಿ ಪರೀಕ್ಷೆಯನ್ನು ಬರೆಯಲು ಇಲ್ಲಿ ಕ್ಲಿಕ್ ಮಾಡಿ 👇
ಉಚಿತ ಪೊಲೀಸ್ ಕಾನ್ಸ್ಟೇಬಲ್ ಮಾಕ್ ಟೆಸ್ಟ್ 5: 50 ಬಹುಮುಖ್ಯ ಪ್ರಶ್ನೆಗಳು ಸಂಪೂರ್ಣ ವಿವರಣೆಯೊಂದಿಗೆ.