Police constable Recruitment 2026
ನಮಸ್ಕಾರ ಸ್ನೇಹಿತರೆ, ಸಮಗ್ರ ಮಾಹಿತಿ ಸಂಚಾರಿ ವೆಬ್ಸೈಟ್ಗೆ ಸ್ವಾಗತ!
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಕನಸು ಕಾಣುತ್ತಿರುವ ಯುವಕ ಯುವತಿಯರಿಗೆ ಕರ್ನಾಟಕ ಸರ್ಕಾರವು ಭರ್ಜರಿ ಸಿಹಿ ಸುದ್ದಿ ಒಂದನ್ನು ನೀಡಿದೆ . ಪೊಲೀಸ್ ಇಲಾಖೆಯ ಮಿಕ್ಕುಳಿದ ವೃಂದದಲ್ಲಿ ಖಾಲಿ ಇರುವ ಒಟ್ಟು 3395 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಲಾಗಿದೆ . ಈ ನೇಮಕಾತಿಯ ಲಿಖಿತ ಪರೀಕ್ಷೆಯನ್ನು ಈ ಬಾರಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA)ವತಿಯಿಂದ ನಡೆಸಲಾಗುತ್ತದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಈ ಹುದ್ದೆಗಳ ವೇತನ ಶ್ರೇಣಿಯು 37500 ರೂ . ಗಳಿಂದ ಪ್ರಾರಂಭವಾಗಿ 76100 ರೂ ಗಳ ವರೆಗೆ ಇರುತ್ತದೆ , ಯುವ ಜನತೆಗೆ ಇದೊಂದು ಸುವರ್ಣ ಅವಕಾಶವಾಗಿದೆ ಈ ಪೋಸ್ಟ್ ನಲ್ಲಿ ಹುದ್ದೆಗಳ ವಿಂಗಡಣೆ, ಶೈಕ್ಷಣಿಕ ಅರ್ಹತೆ, ವಯೋಮಿತಿ ಮತ್ತು ಆಯ್ಕೆ ಪ್ರಕ್ರಿಯೆ ಸಂಪೂರ್ಣ ವಿವರವನ್ನು ಸರಳವಾಗಿ ವಿವರಿಸಲಾಗಿದೆ.
ಅರ್ಜಿ ಸಲ್ಲಿಸುವ ಕಾಲಾವಧಿ ಜೂನ್ 10, 2026 ರಿಂದ ಜುಲೈ 3 , 2026 ರ ಒಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು
ಹುದ್ದೆಗಳ ಸಂಪೂರ್ಣ ವಿವರ
• ಹುದ್ದೆಯ ಹೆಸರು : ಸಿವಿಲ್ ಪೊಲೀಸ್ ಕಾನ್ಸ್ಟೇಬಲ್
• ವೇತನ ಶ್ರೇಣಿ : ₹ 37,500 – ₹ 76,100
• ಒಟ್ಟು ಹುದ್ದೆಗಳು : 3395
ನೇರ ಪುರುಷ: 2266
ನೇರ ಮಹಿಳೆ: 755
ಸೇವಾನಿರತ ಪುರುಷ: 257
ಸೇವಾನಿರತ ಮಹಿಳೆ: 82
ತೃತೀಯ ಲಿಂಗ: 35
ಈ ಹುದ್ದೆಗಳು ರಾಜ್ಯದ ವಿವಿಧ ಜಿಲ್ಲೆಗಳು, ನಗರಗಳು ಮತ್ತು ಘಟಕಗಳಲ್ಲಿ ಭರ್ತಿಯಾಗಲಿವೆ.
ಶೈಕ್ಷಣಿಕ ವಿದ್ಯಾರ್ಹತೆ (Educational qualification)
• ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಪಿಯುಸಿ ಅಥವಾ ಅದಕ್ಕೆ ಸಮಾನವಾದ ವಿದ್ಯಾರ್ಹತೆಯನ್ನು ಹೊಂದಿರಬೇಕು. ಪಿಯುಸಿಗೆ ತತ್ಸಮಾನವಾದ ವಿದ್ಯಾರ್ಹತೆ ಬಗ್ಗೆ ಸರ್ಕಾರವು ಸ್ಪಷ್ಟವಾದ ವಿವರಣೆಯನ್ನು ನೀಡಿದೆ.
1. ಸಿಬಿಎಸ್ಸಿ ಮತ್ತು ಐ ಎಸ್ ಸಿ ಮಂಡಳಿಯ ನಡೆಸುವ ಕ್ಲಾಸ್ 12 ಪರೀಕ್ಷೆ ಹಾಗೂ ಇತರೆ ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿಗಳಿಂದ ನಡೆಸುವ 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು.
2. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (NIOS) ವತಿಯಿಂದ ನಡೆಸುವ ಉನ್ನತ ಪ್ರೌಢ ಶಿಕ್ಷಣ ಕೋರ್ಸ್ ಪಡೆದವರು ಅರ್ಹರಾಗಿರುತ್ತಾರೆ.
3. ಮೂರು ವರ್ಷಗಳ ಡಿಪ್ಲೋಮಾ ವಿದ್ಯಾರ್ಹತೆ ಪಡೆದವರು, ಮತ್ತು ಎರಡು ವರ್ಷಗಳ ಐಟಿಐ ಕೋರ್ಸ್ ಮುಗಿಸಿ ಏನ್ ಐ ಓ ಎಸ್ ಅಥವಾ ಪದವಿ ಪೂರ್ವ ಮಂಡಳಿಯು ನಡೆಸುವ ಪರೀಕ್ಷೆಯಲ್ಲಿ ಒಂದು ಭಾಷೆ ಮತ್ತು ಒಂದು ವಿಷಯದಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಪಿಯುಸಿಗೆ ತತ್ಸಮಾನವೆಂದು ಪರಿಗಣಿಸಲಾಗುತ್ತದೆ
4. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಅಭ್ಯರ್ಥಿಗಳು ಕಡ್ಡಾಯವಾಗಿ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯ ಅಂಕಪಟ್ಟಿಯನ್ನು ಹೊಂದಿರಲೇಬೇಕು, ಕೇವಲ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
ವಯೋಮಿತಿ ಸಡಿಲಿಕೆ ಮತ್ತು ನಿಯಮಗಳು
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಈ ವರ್ಷ ಅಂದರೆ 2026ರ ನೇಮಕಾತಿಗೆ ಸಂಬಂಧಿಸಿದಂತೆ, ಸರ್ಕಾರವು ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ವಿಶೇಷ ಸಡಿಲಿಕೆಯನ್ನು ನೀಡಿದೆ.
1. ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 33 ವರ್ಷ.
2. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ(ಪ್ರವರ್ಗ 1, 2A, 2B,3A,3B)
3. ಕರ್ನಾಟಕದ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 38 ವರ್ಷಗಳಾಗಿದೆ.
4. ಇನ್ನು ಸೇವಾ ನಿರತ ಸಾಮಾನ್ಯ ಅಭ್ಯರ್ಥಿಗಳಿಗೆ 38 ವರ್ಷ ಹಾಗೂ ಮೀಸಲಾತಿ ವರ್ಗದ ಸೇವಾ ನಿರತ ಅಭ್ಯರ್ಥಿಗಳಿಗೆ 40 ವರ್ಷಗಳವರೆಗೆ ವಯೋಮಿತಿ ನಿಗದಿಪಡಿಸಲಾಗಿದೆ. ಸೇವಾ ನಿರತ ಅಭ್ಯರ್ಥಿಗಳು ಪೊಲೀಸ್ ಇಲಾಖೆಯಲ್ಲಿ ಐದು ವರ್ಷಗಳ ಸೇವೆಯನ್ನು ಪೂರೈಸಿರಬೇಕು ಮತ್ತು ಯಾವುದೇ ಚಾಲ್ತಿ ಶಿಕ್ಷೆ ಅಥವಾ ಇಲಾಖಾ ವಿಚಾರಣೆ ಎದುರಿಸುತ್ತಿರಬಾರದು.
ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು ಮತ್ತು ವಿಧಾನ
ಅರ್ಜಿಗಳನ್ನು ಕೇವಲ ಆನ್ಲೈನ್ ಮುಖಾಂತರ ಮಾತ್ರ ಸಲ್ಲಿಸಬೇಕು ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಭರ್ತಿ ಮಾಡಬೇಕಾಗುತ್ತದೆ.
• ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 10.06.2026
• ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 03.07.2026
• ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ : 04.07.2026
ಅರ್ಜಿಯನ್ನು ಒಮ್ಮೆ ಸಲ್ಲಿಸಿದ ನಂತರ ಯಾವುದೇ ತಿದ್ದುಪಡಿ ಅಥವಾ ಯಾವುದೇ ಬದಲಾವಣೆಗೆ ಅವಕಾಶ ಇರುವುದಿಲ್ಲ. ಆದ್ದರಿಂದ, ಅಭ್ಯರ್ಥಿಗಳು ಅತ್ಯಂತ ಎಚ್ಚರಿಕೆಯಿಂದ, ಅಗತ್ಯ ದಾಖಲೆಗಳೊಂದಿಗೆ ತಮ್ಮ ಮಾಹಿತಿಯನ್ನು ಸರಿಯಾಗಿ ತುಂಬಬೇಕು.
ಕರ್ನಾಟಕ ಪರೀಕ್ಷಾ ಅಧಿಕಾರದ ಅಧಿಕೃತ ವೆಬ್ಸೈಟ್ ಲಿಂಕ್ : https://cetonline.karnataka.gov.in/kea/
ಅರ್ಜಿ ಶುಲ್ಕದ ವಿವರ (Application Fee)
• ಸಾಮಾನ್ಯ ಅರ್ಹತೆ ಮತ್ತು ಇತರೆ ಪ್ರವರ್ಗಗಳಿಗೆ ಸೇರಿದ ಅಭ್ಯರ್ಥಿಗಳು 750 ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
• ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ, ಪ್ರವರ್ಗ 1, ಮಾಜಿ ಸೈನಿಕರು ಹಾಗೂ ತೃತೀಯ ಲಿಂಗ ಅಭ್ಯರ್ಥಿಗಳಿಗೆ ಶುಲ್ಕದಲ್ಲಿ ರಿಯಾಯಿತಿ ನೀಡಲಾಗಿದ್ದು ಅವರು ಕೇವಲ 500 ಶುಲ್ಕವನ್ನು ಕಟ್ಟಬೇಕಾಗುತ್ತದೆ.
• ಶುಲ್ಕವನ್ನು ಆನ್ಲೈನ್ ಮೂಲಕ ಮಾತ್ರ ಪಾವತಿಸಲು ಅವಕಾಶವಿದ್ದು , ಪಾವತಿಸಿದ ಶುಲ್ಕವನ್ನು ಯಾವುದೇ ಕಾರಣಕ್ಕೂ ವಾಪಸ್ ನೀಡುವುದಿಲ್ಲ.
ಲಿಖಿತ ಪರೀಕ್ಷಾ ವಿಧಾನ ಮತ್ತು ಪಠ್ಯಕ್ರಮ (Exam Pattern & Syllabus)
ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಆಯ್ಕೆಯು ಆಫ್ಲೈನ್ ಮಾದರಿಯ OMR ಆಧಾರಿತ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನಡೆಯಲಿದೆ. ಈ ಲಿಖಿತ ಪರೀಕ್ಷೆಯನ್ನು 02.08.2026 ರಂದು ಬೆಳಗ್ಗೆ 10.30 ರಿಂದ 12.00 ಗಂಟೆಯವರೆಗೆ ರಾಜ್ಯದ ಆಯ್ದ ಜಿಲ್ಲಾ ಕೇಂದ್ರಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ. ಪರೀಕ್ಷೆಯು ಒಟ್ಟು 100 ಪ್ರಶ್ನೆಗಳನ್ನು ಒಳಗೊಂಡಿದ್ದು, ಪ್ರತಿಯೊಂದು ಪ್ರಶ್ನೆಗೂ 1 ಅಂಕದಂತೆ ಒಟ್ಟು 100 ಅಂಕಗಳಿಗೆ ಪರೀಕ್ಷೆ ನಡೆಯುತ್ತದೆ. ಪರೀಕ್ಷೆಯನ್ನು ಬರೆಯಲು ಅಭ್ಯರ್ಥಿಗಳಿಗೆ 1 ಗಂಟೆ 30 ನಿಮಿಷಗಳ (90 ನಿಮಿಷಗಳು) ಕಾಲಾವಕಾಶ ನೀಡಲಾಗುತ್ತದೆ.
ಅಭ್ಯರ್ಥಿಗಳು ನೆನಪಿಡಬೇಕಾದ ಬಹುಮುಖ್ಯ ಅಂಶವೆಂದರೆ ನೆಗೆಟಿವ್ ಮಾರ್ಕಿಂಗ್ ವ್ಯವಸ್ಥೆ. ಪ್ರತಿಯೊಂದು ತಪ್ಪು ಉತ್ತರಕ್ಕೂ 0.25 (ನಾಲ್ಕನೇ ಒಂದಂಶ) ಅಂಕಗಳನ್ನು ಕಳೆಯಲಾಗುತ್ತದೆ. OMR ಶೀಟ್ನಲ್ಲಿ 5ನೇ ಆಯ್ಕೆಯನ್ನು ನೀಡಲಾಗಿರುತ್ತದೆ. ಯಾವುದೇ ಪ್ರಶ್ನೆಗೆ ಉತ್ತರ ಗೊತ್ತಿಲ್ಲದಿದ್ದರೆ ಐದನೇ ವೃತ್ತವನ್ನು ಶೇಡ್ ಮಾಡಬೇಕು. ಒಂದು ವೇಳೆ ಯಾವುದೇ ವೃತ್ತವನ್ನು ಶೇಡ್ ಮಾಡಿಲ್ಲದಿದ್ದರೂ ಆ ಪ್ರಶ್ನೆಗೆ 0.25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ನೇಮಕಾತಿಗೆ ಅರ್ಹತೆ ಪಡೆಯಲು ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ 30 ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿದೆ.
ಪಠ್ಯಕ್ರಮ: ಸಾಮಾನ್ಯ ಜ್ಞಾನ, ವಿಜ್ಞಾನ, ಭೂಗೋಳ, ಇತಿಹಾಸ, ಭಾರತದ ಸಂವಿಧಾನ, ರಾಷ್ಟ್ರೀಯ ಸ್ವಾತಂತ್ರ್ಯ ಚಳುವಳಿ, ಮಾನಸಿಕ ಸಾಮರ್ಥ್ಯ ಮತ್ತು ನೈತಿಕ ಶಿಕ್ಷಣವನ್ನು ಒಳಗೊಂಡ ಸಾಮಾನ್ಯ ಅಧ್ಯಯನವು ಪರೀಕ್ಷೆಯ ಪಠ್ಯಕ್ರಮವಾಗಿರುತ್ತದೆ.
ದೇಹದಾರ್ಡ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆ (PST and ET)
ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ 1:5 ರ ಅನುಪಾತದಲ್ಲಿ ದೈಹಿಕ ಪರೀಕ್ಷೆಗೆ ಕರೆಯಲಾಗುತ್ತದೆ.
ಪುರುಷ & ಸೇವಾನಿರತ ಪುರುಷ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ದೈಹಿಕ ಮಾನದಂಡ:
ಅಭ್ಯರ್ಥಿಗಳು ಕನಿಷ್ಠ 168 ಸೆಂ.ಮೀ ಎತ್ತರ ಹೊಂದಿರಬೇಕು. ಎದೆ ಸುತ್ತಳತೆಯು ಪೂರ್ತಿ ವಿಸ್ತರಿಸಿದಾಗ 86 ಸೆಂ.ಮೀ ಇರಬೇಕು ಹಾಗೂ ಕನಿಷ್ಠ 5 ಸೆಂ.ಮೀ ವಿಸ್ತರಣೆ ಕಡ್ಡಾಯವಾಗಿದೆ. ಕರ್ನಾಟಕದ ಅರಣ್ಯ ಪ್ರದೇಶದಲ್ಲಿ ವಾಸಿಸುವ ಬುಡಕಟ್ಟು ಪುರುಷ ಅಭ್ಯರ್ಥಿಗಳಿಗೆ ಕನಿಷ್ಠ ಎತ್ತರ 155 ಸೆಂ.ಮೀ ಹಾಗೂ ಎದೆ ಸುತ್ತಳತೆ ಕನಿಷ್ಠ 75 ಸೆಂ.ಮೀ (5 ಸೆಂ.ಮೀ ವಿಸ್ತರಣೆಯೊಂದಿಗೆ) ನಿಗದಿಪಡಿಸಲಾಗಿದೆ.
ಇವರಿಗೆ 1600 ಮೀಟರ್ ಓಟವನ್ನು 6 ನಿಮಿಷ 30 ಸೆಕೆಂಡ್ಗಳಲ್ಲಿ ಪೂರೈಸಬೇಕು. ಜೊತೆಗೆ 1.20 ಮೀಟರ್ ಎತ್ತರ ಜಿಗಿತ ಅಥವಾ 3.80 ಮೀಟರ್ ಉದ್ದ ಜಿಗಿತ ಹಾಗೂ 7.26 ಕೆ.ಜಿ ತೂಕದ ಗುಂಡು ಎಸೆತವನ್ನು 5.60 ಮೀಟರ್ಗಿಂತ ಕಡಿಮೆ ಇಲ್ಲದಂತೆ ಎಸೆಯಬೇಕು (ಇದಕ್ಕೆ 3 ಅವಕಾಶಗಳನ್ನು ನೀಡಲಾಗುತ್ತದೆ).
ಮಹಿಳಾ ಮತ್ತು ತೃತೀಯ ಲಿಂಗ ಅಭ್ಯರ್ಥಿಗಳಿಗೆ ದೈಹಿಕ ಮಾನದಂಡ:
ಈ ಅಭ್ಯರ್ಥಿಗಳು ಕನಿಷ್ಠ 157 ಸೆಂ.ಮೀ ಎತ್ತರ ಮತ್ತು ಕನಿಷ್ಠ 45 ಕೆ.ಜಿ ತೂಕವನ್ನು ಹೊಂದಿರಬೇಕು. ಬುಡಕಟ್ಟು ಮಹಿಳಾ ಅಭ್ಯರ್ಥಿಗಳಿಗೆ ಕನಿಷ್ಠ ಎತ್ತರವನ್ನು 150 ಸೆಂ.ಮೀ ಗೆ ಇಳಿಸಲಾಗಿದೆ.
ಇವರು 400 ಮೀಟರ್ ಓಟವನ್ನು 2 ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ ಪೂರ್ಣಗೊಳಿಸಬೇಕು. 0.90 ಮೀಟರ್ ಎತ್ತರ ಜಿಗಿತ ಅಥವಾ 2.50 ಮೀಟರ್ ಉದ್ದ ಜಿಗಿತ ಮತ್ತು 4 ಕೆ.ಜಿ ತೂಕದ ಗುಂಡು ಎಸೆತವನ್ನು 3.75 ಮೀಟರ್ ದೂರಕ್ಕೆ ಎಸೆಯಬೇಕು (ಇವರಿಗೂ 3 ಅವಕಾಶಗಳಿರುತ್ತವೆ).
ವೈದ್ಯಕೀಯ ಪರೀಕ್ಷೆ ಮತ್ತು ಇತರ ಮೀಸಲಾತಿ ನಿಯಮಗಳು
ದೈಹಿಕ ಪರೀಕ್ಷೆಯಲ್ಲಿ ತೇರ್ಗಡೆಯಾದವರನ್ನು 1:2 ಅನುಪಾತದಲ್ಲಿ ಶಾರ್ಟ್ಲಿಸ್ಟ್ ಮಾಡಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಕಣ್ಣಿನ ದೃಷ್ಟಿ (ದೂರದ ದೃಷ್ಟಿ 6/9 ಮತ್ತು ಸಮೀಪದ ದೃಷ್ಟಿ 0/6), ಶ್ರವಣ ಶಕ್ತಿ, ಎದೆಯ ಕ್ಷ-ಕಿರಣ (Chest X-Ray) ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಫ್ಲಾಟ್ ಫುಟ್, ನಾಕ್ ನೀಸ್, ಅಥವಾ ವೆರಿಕೋಸ್ ವೇನ್ಸ್ ನಂತಹ ದೈಹಿಕ ನ್ಯೂನತೆಗಳಿದ್ದರೆ ಅವರನ್ನು ಅನರ್ಹರೆಂದು ಪರಿಗಣಿಸಲಾಗುತ್ತದೆ.
ಗ್ರಾಮೀಣ, ಕನ್ನಡ ಮಾಧ್ಯಮ, ಮತ್ತು ಯೋಜನಾ ನಿರಾಶ್ರಿತ ಮೀಸಲಾತಿ ಕೋರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ನಿಗದಿತ ನಮೂನೆಗಳಲ್ಲಿ ಪ್ರಮಾಣ ಪತ್ರಗಳನ್ನು ಸಂಬಂಧಪಟ್ಟ ತಹಸೀಲ್ದಾರ್ ಅಥವಾ ಶಿಕ್ಷಣಾಧಿಕಾರಿಗಳಿಂದ ಕಡ್ಡಾಯವಾಗಿ ಪಡೆದಿಟ್ಟುಕೊಳ್ಳಬೇಕು. ತೃತೀಯ ಲಿಂಗಿ ಅಭ್ಯರ್ಥಿಗಳು ಜಿಲ್ಲಾ ಮ್ಯಾಜಿಸ್ಟ್ರೇಟ್ರವರಿಂದ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯ.
ಈ ಭಾರಿ ಪೊಲೀಸ್ ನೇಮಕಾತಿಯು ನಿರುದ್ಯೋಗಿ ಯುವಜನತೆಗೆ ಒಂದು ದೊಡ್ಡ ಭರವಸೆಯಾಗಿದೆ. ಎಲ್ಲಾ ಅಭ್ಯರ್ಥಿಗಳು ಸರಿಯಾದ ದಾಖಲೆಗಳೊಂದಿಗೆ, ನಿಗದಿತ ದಿನಾಂಕದೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ. KEA ಅಥವಾ ಪೊಲೀಸ್ ಇಲಾಖೆಯ ಅಧಿಕೃತ ವೆಬ್ಸೈಟ್ಗಳನ್ನು ನಿಯಮಿತವಾಗಿ ಪರಿಶೀಲಿಸುತ್ತಿರುವುದು ಸೂಕ್ತ. ಶುಭವಾಗಲಿ!
ತೀರ್ಮಾನ – ನಿಮ್ಮ ಕನಸು ನನಸಾಗಲು ಇದೇ ಕ್ಷಣ!
ನಿಮ್ಮ ಕನಸು ನನಸಾಗುವ ಸಮಯವಿದು!
ನನ್ನ ಪ್ರಿಯ ಸಹೋದರ-ಸಹೋದರಿಯರೇ, ಪೊಲೀಸ್ ಕಾನ್ಸ್ಟೇಬಲ್ ಹುದ್ದೆ ಕೇವಲ ಒಂದು ಉದ್ಯೋಗವಲ್ಲ; ಇದೊಂದು ಜವಾಬ್ದಾರಿ. ನಿಮ್ಮ ಹಾಗೂ ನಿಮ್ಮ ಪೋಷಕರ ಕನಸು ನನಸು ಮಾಡಲು ಇದೊಂದು ಸುವರ್ಣಾವಕಾಶ.
ಲಿಖಿತ ಪರೀಕ್ಷೆಗೆ ಇನ್ನು ಕೇವಲ 50 ದಿನಗಳಷ್ಟೇ ಬಾಕಿ ಇದೆ. ಇಂದೇ ಒಂದು ಟೈಮ್ಟೇಬಲ್ ಹಾಕಿಕೊಂಡು ಓದಲು ಶುರು ಮಾಡಿ. ನೆಗೆಟಿವ್ ಮಾರ್ಕಿಂಗ್ ಬಗ್ಗೆ ಎಚ್ಚರವಿರಲಿ. ಕೊನೆಯ ದಿನಾಂಕದವರೆಗೆ ಕಾಯದೆ, ಅಗತ್ಯ ದಾಖಲೆಗಳೊಂದಿಗೆ (ಗ್ರಾಮೀಣ/ಕನ್ನಡ ಮಾಧ್ಯಮ ಪ್ರಮಾಣಪತ್ರ) ಆದಷ್ಟು ಬೇಗ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ. ನಿಮ್ಮ ಶ್ರಮಕ್ಕೆ ಖಂಡಿತಾ ಪ್ರತಿಫಲ ಸಿಗುತ್ತದೆ,
ಜೈ ಕರ್ನಾಟಕ! ಜೈ ಭಾರತ!
📱 ಮುಂದಿನ ಅಪ್ಡೇಟ್ಗಳನ್ನು ಮಿಸ್ ಮಾಡಿಕೊಳ್ಳಬೇಡಿ!
ಪರೀಕ್ಷೆಯ ಪ್ರವೇಶ ಪತ್ರ (Admit Card) ಬಿಡುಗಡೆಯಾದ ತಕ್ಷಣದ ಮಾಹಿತಿ ಮತ್ತು ಉಚಿತ ಸ್ಟಡಿ ಮೆಟೀರಿಯಲ್ಸ್ ಪಡೆಯಲು ನಮ್ಮ ಟೆಲಿಗ್ರಾಮ್ ಮತ್ತು ವಾಟ್ಸಾಪ್ ಕುಟುಂಬಕ್ಕೆ ಇಂದೇ ಸೇರಿಕೊಳ್ಳಿ. ಸಾವಿರಾರು ವಿದ್ಯಾರ್ಥಿಗಳು ಈಗಾಗಲೇ ಜಾಯಿನ್ ಆಗಿದ್ದಾರೆ!
[👉 ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ]
[👉 ನಮ್ಮ ಟೆಲಿಗ್ರಾಮ್ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ]
Read More: ಸರ್ಕಾರಿ ಉದ್ಯೋಗದ ಕನಸು ನನಸಾಗಲಿ : ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವ ಬಗೆ ಹೇಗೆ? – ಸಂಪೂರ್ಣ ಮಾರ್ಗದರ್ಶಿ